Index   ವಚನ - 70    Search  
 
ಬಯಲಬೊಮ್ಮವ ನುಡಿವ, ಆ ನುಡಿಯ ಬಯಲ ಭ್ರಮೆಯಲ್ಲಿ ಬಿದ್ದ ಜಡರುಗಳು ಬಲ್ಲರೆ, ಶಿವನಡಿಗಳ? ಗುರುಲಿಂಗಜಂಗಮದ ಪಾದೋದಕ ಪ್ರಸಾದವೆಂಬ ಪರಮಾಮೃತವ ಸವಿದು, ಪರವಶನಾದ ಪರಮಮುಗ್ಧಂಗಲ್ಲದೆ ಪರವು ಸಾಧ್ಯವಾಗದು, ಮಹಾಲಿಂಗ ಕಲ್ಲೇಶ್ವರನ ಶರಣ ಪೂರ್ವಾಚಾರಿ ಬಸವಣ್ಣಂಗಲ್ಲದೆ.