Index   ವಚನ - 86    Search  
 
ಲಿಂಗಕ್ಕೆ ಹೊರೆ ಹೊರೆಯಲ್ಲದೆ, ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆಯುಂಟೆ? ಸಂಸಾರಿಗೆ ಪ್ರಕೃತಿರಾಗದ್ವೇಷವಲ್ಲದೆ, ಮನ ಮಹದಲ್ಲಿ ನಿಂದ ನಿಜಲಿಂಗಾಂಗಿಗೆ ಉಭಯದ ಸಂದುಂಟೆ? ಈ ಗುಣ ಲಿಂಗಾಂಗಿಯ ಸಂಗ, ಮಹಾಮಹಿಮ ಕಲ್ಲೇಶ್ವರಲಿಂಗವು ತಾನಾದ ಶರಣ.