ಲಿಂಗರ್ಪಿತವಿಲ್ಲದೆ ಕೊಂಬ ಕರ್ಮಿಗಳು, ನೀವು ಕೇಳರೆ.
ಅನರ್ಪಿತವೇನ ಮಾಡದು?
ಅನರ್ಪಿತವೆಲ್ಲಿಗೈಯದು?
ಶ್ರುತಿ:
ಅಸಮಪ್ರ್ಯ ಪದಾರ್ಥಮ ಶಂಭೋಃ ಭುಂಕ್ತೇ ಉದಕಂ ಪಾತಿ ಚ |
ಸ್ವಮಾಂಸಮಸ್ಥಿ ಮೂತ್ರಂ ಚ ಭುಂಕ್ತೇ ಖಾದತಿ ಪಾತಿ ಚ |
ಎಂದುದಾಗಿ ಇದು ಕಾರಣ
ಮಹಾಲಿಂಗ ಕಲ್ಲೇಶ್ವರ ದೇವರಿಗರ್ಪಿಸದೆ ಕೊಂಡಡೆ
ನಾಯ ಮಾಂಸ ನಾಯ ಎಲು [ವ] ನಾಯ ಮೂತ್ರವನು
ತಿಂದು ಅಗಿದು ಕುಡೆದಂತೆ ಕಾಣಿಕೆ,
Art
Manuscript
Music
Courtesy:
Transliteration
Liṅgarpitavillade komba karmigaḷu, nīvu kēḷare.
Anarpitavēna māḍadu?
Anarpitavelligaiyadu?
Śruti:
Asamaprya padārthama śambhōḥ bhuṅktē udakaṁ pāti ca |
svamānsamasthi mūtraṁ ca bhuṅktē khādati pāti ca |
endudāgi idu kāraṇa
mahāliṅga kallēśvara dēvarigarpisade koṇḍaḍe
nāya mānsa nāya elu [va] nāya mūtravanu
tindu agidu kuḍedante kāṇike,