Index   ವಚನ - 102    Search  
 
ಹಸಿಯ ಕಪಾಲದಲ್ಲಿ ಉಂಬನೆಂಬರು, ಅದು ಹುಸಿ, ಭಕ್ತನ ಮುಖದಲ್ಲಿ ಉಂಬನಾಗಿ. ಅಸ್ಥಿಗಳ ತೊಟ್ಟನೆಂಬರು, ಅದು ಹುಸಿ, ಭಕ್ತದೇಹಿಕದೇವನಾಗಿ, ಚರ್ಮವ ಹೊದ್ದನೆಂಬರು, ಅದು ಹುಸಿ, ಆ ಭಕ್ತನಲ್ಲಿ ಸದಾಸನ್ನಹಿತನಾಗಿಪ್ಪನಾಗಿ. ಅದೆಂತೆಂದಡೆ-ಬ್ರಹ್ಮಾಂಡ ಪುರಾಣೇ: ನೈವೇದ್ಯಂ ಪುರತೋ ನ್ಯಸ್ತಂ ದರ್ಶನಾತ್ಸ್ವೀಕೃತಂ ಮಯಾ | ರಸಾನ್ಭಕ್ತಸ್ಯ ಜಿಹ್ವಾಗ್ರಾದಶ್ನಾಮಿ ಕಮಲೋದ್ಭವ || ಎಂದುದಾಗಿ, ವಾತುಲೇ: ಯಾವನ್ನಿರ್ವಹತೇ ಯಸ್ತು ಯಾವಜ್ಜೀವಂ ಪ್ರತಿಜ್ಞಯಾ | ಮನುಷ್ಯಚರ್ಮಣಾ ಬದ್ಧಃ ಸ ರುದ್ರೋ ನಾತ್ರ ಸಂಶಯಃ || ಎಂದುದಾಗಿ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಸುಳುಹು ಪರಕಾಯಪ್ರವೇಶವಾಗಿಹುದು.