ವಚನ - 6     
 
ಅಂಗವ ಮರೆವನ್ನಕ್ಕರ, ಲಿಂಗಾ, ನಿಮ್ಮ ಚೆಲುವ ಕಂಗಳು ತುಂಬಿ ನೋಡುತ್ತಲೆಂದಿಪ್ಪೆನೊ! ಪರಿಪರಿಯ ನೋಟದಿಂದ ಹರುಷವನೈದಿಕೊಂಡು ಪರಮೇಕಾಂತದೊಳೆಂದಿಪ್ಪೆನೊ! ವರಗುರು ಕಪಿಲಸಿದ್ಧಮಲ್ಲಿಕಾರ್ಜುನಾ, ನಿಮ್ಮ ಶರಣ ಪ್ರಭುವಿನ ಕರುಣವೆಂದಪ್ಪುದೊ!