•  
  •  
  •  
  •  
Index   ವಚನ - 16    Search  
 
ಅಂತರಾತ್ಮ ಪರಮಾತ್ಮ ಭೂತಾತ್ಮವೊಳಗಾದ ಆಧ್ಯಾತ್ಮಿ ಕೇಳಾ: ನೀನು ಯೋಗದ ಪ್ರಮಾಣ ಬಲ್ಲ ಅಯ್ಯನು ಶ್ರೋತ್ರೇಯ ಮನೆಯಲ್ಲಿ, ನೇತ್ರೆಯ ಜಿಹ್ವೆಯಲ್ಲಿ, ಆನಂದ ಪಾತ್ರೆಯಲ್ಲಿ ಸಂಗತಿ ಸದಾಚಾರ ನಿಷ್ಕಳ ಪರಮಸೀಮೆ ಎಂಬ ಪಾತ್ರೆಯಲ್ಲಿ ಪಂಚಬ್ರಹ್ಮವನೊಡಗೂಡಿದ ಪಂಚಸ್ತ್ರೀಯರಿಗೆ ಪ್ರಸಾದವನಿಕ್ಕುವಾಗ ಪ್ರಸನ್ನತೆಯೆಂಬ ಪ್ರಸಾದವನನುಗ್ರಹಿಸಲರಿಯದೆ ಇದ್ದ ಕಾರಣ ಅಂತರಿಸಿದೆಯಯ್ಯಾ ಆದ್ಯಂತಪ್ರಸಾದವ ಕೊಂಡ ಕಾರಣದಲ್ಲಿ ಆನು ನೀನಾದೆ; ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಸಂದಳಿದೆ.
Transliteration Antarātma paramātma bhūtātmavoḷagāda ādhyātmi kēḷā: Nīnu yōgada pramāṇa balla ayyanu śrōtreya mane, nētreya jihveyalli, ānanda pātreyalli saṅgati sadācāra niṣkaḷa paramasīme emba pātreyalli pan̄cabrahmavanoḍagūḍida pan̄castrīyarige prasādavanikkuvāga prasannateyemba prasādavananugrahisalariyade idda kāraṇa antarisideyayya ādyantaprasādava koṇḍa kāraṇadalli ānu nīnāde; kapilasid'dhamallikārjunana kūḍi sandaḷide.