ಅಂಧಕಾರದ ಗಿರಿ ಅರಿವೇರಿತು ಅನುವಿಡಿದು ಸುಖವ ಕಂಡು
ಅನುಭವದವಳಿಗೆ[ಕೆಂಪುವರ್ಣ] ಸುಖವನೇಕೀಕರಿಸಿ ನೋಡಲು
ಆಯತವಾಯಿತ್ತು ಈ ಅಂಧಕಾರದ ಎರಡೆಸಳಪೀಠ
ಆ ಪೀಠದಲ್ಲಿ ಸಮಯಾಚಾರಿಯೆಂಬವ ನಿಂದು
ಪರಿಣಾಮವಿಡಿದು ನಡೆಯೆ,
ಆತ್ಮನ ಗುಣ ಕೆಟ್ಟು ನೆಲೆಗೊಂಡನಯ್ಯಾ
ನಿಮ್ಮ ಶರಣ ಚೆನ್ನಬಸವಣ್ಣನು.
ಕಪಿಲಸಿದ್ಧಮಲ್ಲಿನಾಥಯ್ಯಾ,
ಚೆನ್ನಬಸವಣ್ಣನ ಧರ್ಮದಿಂ ಬದುಕಿದೆನು.