ಅಡವಿಯಲ್ಲಿ ತಡೆಗಡಿದ ಪಶುವಿನಂತಾದೆವಾವೆಲ್ಲ ಅಯ್ಯಾ!
ಅಕ್ಕಟಾ, ಒಡೆಯರಿಲ್ಲದ ಅನಾಥರಾದೆವಾವೆಲ್ಲ ಅಯ್ಯಾ!
ಅಕ್ಕಟಾ, ನಮಗಿನ್ನು ದಿಕ್ಕಾರು, ದೆಸೆಯಾರು?
ಅಕ್ಕಟಾ, ನಮಗಿನ್ನು ಒಡೆಯರಾರು? ಹೇಳಾ ತಂದೆ!
ಅಯ್ಯಾ, ಶ್ರೀಮಲ್ಲಿನಾಥಲಿಂಗಾ, ಅವಧರಿಸು ಎನ್ನ ಬಿನ್ನಹವ
ಗಣಾಚಾರಕ್ಕೆ ಬುದ್ಧಿಗಲಿಸುವುದೆನ್ನ ತಂದೆ!
Transliteration Aḍaviyalli taḍegaḍida paśuvinantādevāvella ayyā!
Akkaṭā, oḍeyarillada anātharādevāvella ayyā!
Akkaṭā, namaginnu dikkāru, deseyāru?
Akkaṭā, namaginnu oḍeyarāru? Hēḷā tande!
Ayya, śrīmallināthaliṅga, avadharisu enna binnahava
gaṇācārakke bud'dhigalisuvenna tande!