•  
  •  
  •  
  •  
Index   ವಚನ - 156    Search  
 
ಆದಿಯಕ್ಷರದಂತೆ ಆದವು ನಿನ್ನಹಾಗೆ ಆಮೋದದಾಹಾರವಯ್ಯ. ಹುಟ್ಟುಗೆಟ್ಟಭವನೆ ಕೇಳಾ ಅಯ್ಯಾ, ನೀನು ಹುಟ್ಟಿದಡೆ ಲಜ್ಜೆ ನಿನಗೆ. ಮುಕ್ತಿ ಪುದಿದಾ ಲೋಕದಲ್ಲಿ ಹುಟ್ಟಿದೆಯಾದಡೆ ನಿಷ್ಠೆ ನಿನ್ನ ಹೊರೆವುದು. ಕಪಿಲಸಿದ್ಧಮಲ್ಲಿನಾಥಯ್ಯಾ ನೀ ಹೊತ್ತ ಹೊರೆಯನಿಳುಹುವರಿಲ್ಲ.
Transliteration Ādiyakṣaradante ādavu ninnahāge āmōdadāhāravayya. Huṭṭugeṭṭabhavane kēḷā ayya, nīnu huṭṭideḍe lajje ninage. Mukti pudidā lōkadalli huṭṭideyādaḍe niṣṭhe ninna horevudu. Kapilasid'dhamallināthayya nī hotta horeyaniḷuhuvarilla.