•  
  •  
  •  
  •  
Index   ವಚನ - 159    Search  
 
ಆದಿಯಾಧಾರವಿಲ್ಲದಂದಿನ ಪ್ರಸಾದ; ಅಗಮ್ಯ ಅಗೋಚರ ಅಪ್ರಮಾಣವೆಂದೆನಿಸುವ ಪ್ರಸಾದ; `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಪ್ರಸಾದ; `ನಿಜತ್ವ ಪ್ರಾಣನಿರ್ಮಲಂ' ಎಂದೆನಿಸುವ ಪ್ರಸಾದ; `ಶಿವೈಕ್ಯಂ ಸುಖಸಂಬಂಧಂ' ಎಂದೆನಿಸುವ ಪ್ರಸಾದ; `ಪರಮಾತ್ಮೇತ್ಯಯಂ ರುದ್ರಃ' ಎಂದೆನಿಸುವ ಪ್ರಸಾದ; `ಅಕ್ಷರಾತ್ಮಾಶಿವಂ ಸೂತ್ರಂ' ಎಂದೆನಿಸುವ ಪ್ರಸಾದ; ಇನಿತಪ್ಪ ಪರಮಸುಖದ ಪರಮಪ್ರಸಾದವು ಒಂದಾಗಿ, ನಿತ್ಯಮುತ್ತೈದೆಯ ಭಾವದಲ್ಲಿ ಶುದ್ಧವಾಯಿತ್ತಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ādiyādhāravilladandina prasāda; agamya agōcara apramāṇavendenisuva prasāda; `aṇōraṇīyān mahatō mahīyān' endenisuva prasāda; `nijatva prāṇanirmalaṁ' endenisuva prasāda; `śivaikyaṁ sukhasambandhaṁ' endenisuva prasāda; `paramātmētyayaṁ rudraḥ' endenisuva prasāda; `akṣarātmaśivaṁ sūtraṁ' endenisuva prasāda; initappa paramasukhada paramaprasādavu ondāgi, nityamuttaideya bhāvadalli śud'dhavāyittayyā, kapilasid'dhamallināthayya।