ವಚನ - 174     
 
ಆನಂದಸ್ಥಾನದಲ್ಲಿ, ಶುದ್ಧಧವಳ ಮನೆಯಲ್ಲಿ, ನಿತ್ಯ ಜಾಗರವ ಮಾಡುವ ಅವ್ವೆ ನೀ ಕೇಳಾ. ಬಂದವರ ಬಲ್ಲ ಹೋದವರ ಬಲ್ಲ ಬಂದವರು[ಬರಿದೆ] ಹೋದರು ಭವಕ್ಕೆ ಹೇತುವಾಗಿ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕಾಣದೆ.