ವಚನ - 332     
 
ಎಸಳ ಕುಸುಮ ನಿವಾರಿಸಲು ಅಯ್ಯಾ, ನಾನು ನಿನ್ನ ದೆಸೆಗೆ ಕಂಬೇಟಗೊಂಡೆನಯ್ಯಾ. ಪಶುಪಾಶಮೋಚನ ಅಯ್ಯಾ, ನಿನ್ನ ದೆಸೆ ಇದ್ದೆಸೆಯಾಗಯ್ಯಾ. ಶಶಿಧರಾ, ನಿಮ್ಮ ವಶಕ್ಕೆನ್ನ ತೆಗೆದುಕೊಳ್ಳಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.