•  
  •  
  •  
  •  
Index   ವಚನ - 351    Search  
 
ಐದಾರು ಏಳೆಂಟೆಂದೆಂಬ ಬಲೆಯಲ್ಲಿ ಸಿಲಿಕಿ ಎಯ್ದೆಗಾರಾಗುತ್ತಲಿದ್ದೇನೆ. ಮೀರಲಾರೆನು ಕರ್ಮಂಗಳನು ಹಾರು ಮಾಡಿಹವು ಎನ್ನ ಬೇರೆ ಮತ್ತೊಂದು ಉಳ್ಳಡೆ ತೋರಾ. ಸಾರುವ ಶ್ರುತಿಗಳಿಗಿಂದತ್ತಲಾದ ಮಹಾಘನ ನೀನು ನೀರ ಕಪಿಲಸಿದ್ಧಮಲ್ಲಿಕಾರ್ಜುನಯ್ಯ ತಂದೆ.
Transliteration Aidāru ēḷeṇṭendemba baleyalli siliki eydegārāguttaliddēne. Mīralārenu karmaṅgaḷanu hāru māḍ'̔ihavu enna bēre mattondu uḷḷaḍe tōra. Sāruva śrutigaḷindattalada mahāghana nīnu nīra kapilasid'dhamallikārjunayya tande.