ವಚನ - 360     
 
ಒಂದು ಕೋಳಿ ಕೂಗುತ್ತದೆ ಇರುಳು ಹಗಲೆನ್ನದೆ; ಅದನರಿಯರಲ್ಲಾ ಮರ್ತ್ಯದ ಗಣಂಗಳು. ಅರಿದಡೆ ಭವಬಂಧವಿಲ್ಲ, ಮರೆದಡೆ ಜನನ ಮರಣಕ್ಕಳವಿಲ್ಲ! ಕಪಿಲಸಿದ್ಧಮಲ್ಲಿಕಾರ್ಜುನಾ.