•  
  •  
  •  
  •  
Index   ವಚನ - 361    Search  
 
ಒಂದು ಮೂಲಸ್ತಂಭವಿಡಿದ ದೇವಾಲಯದಲ್ಲಿ ಚಂದಚಂದದ ಬಾಗಿಲು ಮೂವತ್ತಾರು. ಒಂದೊಂದು ಎಂಟೆಂಟೆಂಬ ಘನಕ್ಕೆ ಘನ ಸಂತಸ ಸುಖವಾಯಿತ್ತಯ್ಯಾ. ಇಂದ್ರಿಯಾರ್ಪಣ ಸುಖಗೋಷ್ಠಿ ಸಾಧ್ಯವಾಯಿತ್ತಯ್ಯಾ. ನಿಮ್ಮ ದಯದಿಂದ ಕಪಿಲಸಿದ್ಧಮಲ್ಲಿನಾಥಯ್ಯಾ.
Transliteration Ondu mūlastambhaviḍida dēvālayadalli candacandada bāgilu mūvattāru. Ondondu eṇṭeṇṭemba ghanakke ghana santasa sukhavāyittayyā. Indriyārpaṇa sukhagōṣṭhi sādhyavāyittayyā. Nim'ma dayadinda kapilasid'dhamallināthayya.