•  
  •  
  •  
  •  
Index   ವಚನ - 363    Search  
 
ಒಂದೊಂದು ಪರಿಯ ಬೊಂಬೆಗಳು ಬಂದು ಬಂದಾಡಲ್ಕೆ ಕಂಡು ಕಂಡು ನೊಂದೆನಯ್ಯಾ. ಅದರ ದಂದ ಹೊದ್ದಿಹಿದೆಂದು, ಒಬ್ಬಳು ಹೆಂಗೂಸಿಗೆ ಗಂಡರು ನಾಲ್ವರು. ಆಕೆ ಗರ್ಭಿಣಿಯಾಗದ ಮುನ್ನವೆ ಪ್ರಸೂತೆಯಾದಳು ನೋಡಾ. ಗಂಭೀರ ಸ್ಥಳಕ್ಕೆ ನೀವು ಹೋದಿರಾದಡೆ, ಬಂಜೆಯ ಮಕ್ಕಳು ಮೂವರೈದಾರೆ. ಆರು ಗೃಹಂಗಳಂ ಕಟ್ಟಿಕೊಂಡು ಮೂವತ್ತಾರನೆಯ ಮಂಟಪದಲ್ಲಿ ಪರಮಸೀಮೆಯಂ ಮೀರಿದ ಅವರ ಹಿಂದು ಮುಂದರಿತು ಅವು ಪಡುವ ನಿಗ್ರಹಂಗಳಂ ಕಂಡು, ಈ ಮಂದಮತಿಗಯಪ್ಪ ಬೊಂಬೆಗಳ ಹಿಂದು ಮುಂದ ನಾಶವಂ ಮಾಡಿ, ತಂದೆ ನಿಮ್ಮ ಅಂದವ ತೋರಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ondondu pariya bombegaḷu bandu bandāḍalke kaṇḍu kaṇḍu nondenayyā. Adara daṇḍa hoddihidendu, obbaḷu heṅgūsige gaṇḍaru nālvaru. Āke garbhiṇiyāgada munnave prasūteyādaḷu nōḍā. Gambhīra sthaḷakke nīvu hōdirādaḍe, ban̄jeya makkaḷu mūvaraidāre. Āru gr̥haṅgaḷaṁ kaṭṭikoṇḍu mūvattāraneya maṇṭapadalli paramasīmeyaṁ mīrida avara hindu mundaritu avu paḍuva nigrahaṅgaḷaṁ kaṇḍu, ī mandamatigayappa bombegaḷa hindu munda nāśavaṁ māḍi, tande nim'ma andava tōrayya kapilasid'dhamallikārjunā.