ಒಲಿವೆ ನಿನ್ನವರ ನೀನೆಂದಡೆ.
ಒಲಿವೆ ನಿನ್ನವರ ಮೂರ್ತಿಧ್ಯಾನದಲ್ಲಿ ಮೂರ್ಛೆವೋದರೆ.
ಒಲಿವೆ ವಿಭೂತಿ ರುದ್ರಾಕ್ಷಿ ಲಾಂಛನಧಾರಿಯ.
ಮಾನಸ ವಾಚಕ ಕಾಯಕದಲ್ಲಿ ನೀನೆಂದಡೆ ಒಲಿವೆ,
ಅಲ್ಲದಿದ್ದಡೆ ವೈತಾಳಿಕರ ಸಂಯೋಗದ ಹಾಂಗೆ
ವೈಶಿಕವ ಬಳಸಿದಡೆ ಏಕೊಲಿವೆಯಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Olive ninnavara nīnendaḍe.
Olive ninnavara mūrtidhyānadalli mūrchevōdare.
Olive vibhūti rudrākṣi lān̄chanadhāriya.
Mānasa vācaka kāyakadalli nīnendaḍe olive,
alladiddaḍe vaitāḷikara sanyōgada hāṅge
vaiśikava baḷasidaḍe ēkoliveyayya,
kapilasid'dhamallikārjunā.