ವಚನ - 375     
 
ಒಲುಮೆಯ ನಲ್ಲನನು ಒಲಿಸಿ ನೆರೆದೆನೆಂಬ ಮರುಳತನವನೇನೆಂಬೆನಯ್ಯಾ. ಒಲಿಸಲೇಕೆ? ತಾನೆ ಒಲಿದಾನು. ನಿನ್ನಲ್ಲಿ ದೃಢಕೆ ಸಂಬಂಧ ಸಮನಿಸಲುಳ್ಳಡೆ ತಾನೆ ಒಲಿದಾನು. ನಿನ್ನಲ್ಲಿ ದೀಕ್ಷಾತ್ರಯ ಸಂಪನ್ನತೆಯುಳ್ಳಡೆ ತಾನೆ ಒಲಿದಾನು. ಒಲಿದಾನು. ಒಲಿಸದೊಡೊಲಿವನೆ, ಕಪಿಲಸಿದ್ಧಮಲ್ಲಿಕಾರ್ಜುನಾ.