ಓರಂತೆ ಮಾಡಯ್ಯಾ ನಿನ್ನ ನಿನ್ನವರೊಳಗೆ
ಮನ್ನಣೆಯಿಂದ ಮಚ್ಚಿಸಯ್ಯಾ,
ನಿನ್ನವರ ಪಾದೋದಕವ ನಚ್ಚಿಸಯ್ಯಾ,
ನಿನ್ನವರ ಪ್ರಸಾದವ ನಚ್ಚಿಸಿ ಮಚ್ಚಿಸಿ
ಮನಕ್ಕೆ ನೀನೇ ಮಂಗಳವಾಗಿ
ಅಚ್ಚಿಗಬಡಿಸದಂತಿರಿಸಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Ōrante māḍayyā ninna ninnavaroḷage
mannaṇeyinda maccisayyā,
ninnavara pādōdakava naccisayyā,
ninnavara prasādava naccisi maccisi
manakke nīnē maṅgaḷavāgi
accigabaḍisadantirisā kapilasid'dhamallikārjunā।