ವಚನ - 406     
 
ಕರದ ಮಹಾತ್ಮೆಯನು ಹೊಗಳುವರೆ ಎನ್ನಳವೆ? ಕರುಣಾಕರನೆ ಬಲ್ಲ ಗುರುರಾಯನು. ಹಲವು ಬ್ರಹ್ಮಾಂಡವನು ಒಳಗಿಟ್ಟ ಘನವನು ಧರಿಸಿಪ್ಪುದದು ಭಕ್ತಿಕರವು ನೋಡಾ. ಆ ಶರಣರ ಕರವನು ಹೊಗಳುವವು ವೇದಂಗಳಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ.