•  
  •  
  •  
  •  
Index   ವಚನ - 411    Search  
 
ಕರಸ್ಥಲಕೆ ಲಿಂಗ ಬರೆ ಕರಣೇಂದ್ರಿಯಂಗಳಾ ಕರಗಳೆ ಅಯ್ಯನಾ ಪರಿಯಾದವೈ. ಪರಿಯ ಪರಿಯಾ ಒರೆದು ನೋಡುವ ಲೀಲೆ ಪರೀಕ್ಷಿಸುವದೆಲ್ಲವದು ಶುದ್ಧಸಿದ್ಧ ಪ್ರಸಿದ್ಧ ಪರಿಣಾಮವನರಿವಡೆಯು ತವಕಿಗಳಿಗದು ದೂರ. ಗುರುಕರುಣವುಳ್ಳವರ ಹೊಲಬು ತಾನು ಕರುಣಿ ಮಹಾದಾನಿ ಕಪಿಲಸಿದ್ಧಮಲ್ಲಿಕಾರ್ಜುನನ ಜ್ಞಾನ, ಕರಣೇಂದ್ರಿಯವು ಶುದ್ಧ.
Transliteration Karasthalake liṅga bare karaṇēndriyaṅgaḷā karagaḷe ayyanā pariyādavai. Pariya pariya oredu nōḍuva līle parīkṣisuvadellavadu śud'dhasid'dha prasid'dha pariṇāmavanarivaḍeyu tavakigaḷigadu dūra. Gurukaruṇavuḷḷavara holabu tānu karuṇi mahādāni kapilasid'dhamallikārjunana jñāna, karaṇēndriyavu śud'dha.