Index   ವಚನ - 412    Search  
 
ಕರ್ಪರದ ಕರದಲ್ಲಿ ಇದ್ದ ಮೂಜಗವೆಲ್ಲವು ತಪ್ಪದತಿ ಸಿದ್ಧಾಂತವನು ಭೇದಿಸಿ, ಶಬ್ದಬ್ರಹ್ಮವು ಮೀರಿದತ್ತ ಬ್ರಹ್ಮಾಂಡವು ಇತ್ತೆರವು ಕಂದೊಳಲು ಮೂಲೋಕಕೆ. ಅಯ್ಯ ಕೇಳಯ್ಯ, ನಿನ್ನಮೃತಹಸ್ತವನೊಮ್ಮೆ ಒಯ್ಯನೆ ನೀಡಿ ಪರಮಪದದಲ್ಲಿ ಕೈಯೈದರಲ್ಲಿ ಮುಖವು, ನಯನದಲ್ಲಿ ಜಿಹ್ವೆ ತಾನುಣುತಿಪ್ಪ ಕರಮುಖದಲ್ಲಿ ಚೋದ್ಯವ ಬೆಳಗಿನಲ್ಲಿ ಗುರುಕರಣವಿಡಿದಿಪ್ಪ ಭಾವ ಸಜ್ಜನ ಶುದ್ಧ ಸದ್ಭಕ್ತರ ಇಂದ್ರಿಯಂ ಐದು ನಿನ್ನುಂಬ ಜಿಹ್ವೆಯಾಗಿ ಸಂದಣಿಪ ಕರಣ ನಿನ್ನಯ ಚೇತನ. ಇಂತು ಭಕ್ತಂಗೆ ಪ್ರಾಣವು ಶೂನ್ಯ ನಿನಗೀಗ ಅಂತರಿಪ ಕಾಯವಿಲ್ಲದ ಪರಿಯನು, ಇಂತು ವಿಚಾರಿಸುವಡೆ ಭಕ್ತ ಕಾರಣ ಪರಶಿವನು ಸಂತತಂ ಕಪಿಲಸಿದ್ಧಮಲ್ಲಿಕಾರ್ಜುನಾ.