ಕಳೆಯೊಳಗಣ ಭೇದ, ಕಳೆ ನಾದದ ಭೇದ
ಕಳಾವಿದರಿಗಲ್ಲದೆ ವೇದ್ಯವಲ್ಲ.
ಮಧುಕರನುಂಡಿಪ್ಪ ಸದಮದದ ಪರಿಮಳವ
ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣ ಬಲ್ಲ.
Transliteration Kaḷeyoḷagaṇa bhēda, kaḷe nādada bhēda
kaḷāvidarigallade vēdyavalla.
Madhukaranuṇḍippa sadamada parimaḷava
kapilasid'dhamallikārjunayya, nim'ma śaraṇa balla.