ವಚನ - 430     
 
ಕಾಡದೆ ಎನ್ನ ಮನದಿಚ್ಛೆಯ ಮಾಡಯ್ಯಾ, ನಿಮ್ಮ ಧರ್ಮ! ಕಾಡುವುದುಚಿತವೆ ಅಯ್ಯಾ, ನಿಮ್ಮ ಕರುಣದ ಕಂದ ನಾನು! ನಿಮ್ಮ ಕರುಣದ ಕಂದ ನಾನಯ್ಯಾ! ಎಂದುತನಕ ಕಾಡುವಿರಿ ಅಂದುತನಕ ನೋಡುವೆನು. ಹಿಂದುಮುಂದುಗೆಟ್ಟವನೆಂದು ಏಡಿಸಿದಡೆ ತಂದೆ! ನಾ ನಿಮ್ಮನೇಕೆ ಬಿಡುವೆ. ಕರುಣಿಸು ಎನ್ನ ಪರಮಗುರುವೆ ಕಪಿಲಸಿದ್ಧಮಲ್ಲಿಕಾರ್ಜುನಾ.