ವಚನ - 455     
 
ಕುರುಡು ಸೂಳೆಗೆ ಕುಂಟ ಬೊಜಗನು ಕೋಲ ಹಿಡಿದು ನಡೆವಂತೆ ಸೂಳೆತನಗಳ ಮಾಡುವಿರಿ; ಮೊಲೆ ಮುಡಿಗಳ ತೋರುವಿರಯ್ಯಾ. ಶಿವಭಕ್ತ ಮರುಳ ಪ್ರಪಂಚುರಹಿತನು ಕಪಿಲಸಿದ್ಧಮಲ್ಲಿಕಾರ್ಜುನಾ.