ವಚನ - 457     
 
ಕುಲಜನಾಗಿ ನಾನೇವೆನಯ್ಯಾ? ಕುಲದ ಬಳಿಯ ದೇವನಲ್ಲ, ಮನದ ಬಳಿಯ ದೇವನೈಸೆ. ಆವ ಯೋನಿಜನಾದಡೇನು? ನೀನೊಲಿದವನೆ ಕುಲಜನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.