•  
  •  
  •  
  •  
Index   ವಚನ - 495    Search  
 
ಗುರುವಿಗ್ರಹವಿಡಿದು ಸರ್ವಾನುಗ್ರಾಹಕ ನೀನೆ ದೇವಾ. ಚರವಿಗ್ರಹವಿಡಿದು ಚರಾಚರಂಗಳಿಗೆ ಚರಿಸಿ ಸುಕೃತಿಗತಿಯನೀವ ಚರರೂಪ ನೀನೆ ದೇವಾ. ಲಿಂಗವಿಗ್ರಹವಿಡಿದು ಸರ್ವರಿಂ ಪೂಜೆಗೊಂಡು ಅವರವರಾಭಿಷ್ಟಭೋಗವ ಕೊಡುವ ದೇವ ನೀನೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Guruvigrahaviḍidu sarvānugrāhaka nīne dēvā. Caravigrahaviḍidu carācaraṅgaḷige carisi sukr̥tigatiyanīva cararūpa nīne dēvā। liṅgavigrahaviḍidu sarvariṁ pūjegoṇḍu avaravarābhīṣṭabhōgava koḍuva dēva nīne kapilasid'dhamallikārjunā.