Index   ವಚನ - 512    Search  
 
ಘಟಸರ್ಪನ ಘಣಾಮಣಿಯ ಬೆಳಗಿನ ಪ್ರಭೆ ಹಿರಿದು: ಸ್ಥಿರವಾಗಿ ಇರಬಲ್ಲಡೆ. ನಿಸ್ತಾರ, ನಿಸ್ತಾರ, ನಿಸ್ತಾರವು ಸತ್ಯಪ್ರಭೆಯಿಂದಲು ವಿಚಿತ್ರಸ್ಥಾನವಾದಡೆ, ಮತ್ತೆ ನಿತ್ಯ ತಪ್ಪದು, ಕಪಿಲಸಿದ್ಧಮಲ್ಲಿನಾಥಯ್ಯನ.