•  
  •  
  •  
  •  
Index   ವಚನ - 592    Search  
 
ತನ್ನೊಳಗೆನ್ನ ಗತವ ಮಾಡಿದ ಬಳಿಕ ಆದಿಯ ಪದವ ತೋರಿದ ಬಳಿಕ ಮತ್ತಾವುದೂ ಇಲ್ಲಯ್ಯ. ಆದಿಪದವ ನುಂಗಿದ ಬಳಿಕ ಇನ್ನಾವುದೂ ಇಲ್ಲಯ್ಯ. ನೋಡಯ್ಯ, ಎನ್ನ ಹಡದೂ ಕೂಡದಿದ್ದಡೆ ನಿನಗಾವುದು ನಡೆವುದು ಹೇಳಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವಾ.
Transliteration Tannoḷagenna gatava māḍida baḷika ādiya padava tōrida baḷika mattāvudū illayya. Ādipadava nuṅgida baḷika innāvudū illayya. Nōḍayya, enna haḍadū kūḍadiddaḍe ninagāvudu naḍevudu hēḷā, enna kapilasid'dhamallēśvaradēvā.