ವಚನ - 604     
 
ತಾಮಸದಲ್ಲಿ ತಾಮಸಿಯಾಗಿ, ಸೀಮೆಗೆಟ್ಟಲ್ಲಿ ಸಂಬಂಧಿಯಾಗಿ, ಅನಿಮಿಷ ಮೀರಿದಲ್ಲಿ ಆಂದೋಳವಾಗಿ, ಸೀಮೆಗೆಟ್ಟಲ್ಲಿ ಕುರುಹು ತಾನಾಗಿ, ಮಹಾರ್ಣವದಲ್ಲಿ ಮಧ್ಯ ತಾನಾಗಿ, ಎಲ್ಲಾ ಭೂತಕ್ಕೆ ದಯವುಳ್ಳ ಮಹಾಭೂತಿ ತಾನಾಗಿ, ಕಪಿಲಸಿದ್ಧಮಲ್ಲಿಕಾರ್ಜುನಯ್ಯನಲ್ಲಿ ನಿತ್ಯ ಲಿಂಗಾರ್ಚನೆಯ ಮಾಡುವ ಶಿವಯೋಗಿಯ ಪರಿಯಿಂತುಟು.