ವಚನ - 101     
 
ಎನ್ನ ಮನವ ಮಾರುಗೊಂಡನವ್ವಾ, ಎನ್ನ ತನುವ ಸೂರೆಗೊಂಡನವ್ವಾ, ಎನ್ನ ಸುಖವನೊಪ್ಪುಗೊಂಡನವ್ವಾ, ಎನ್ನ ಇರವನಿಂಬುಗೊಂಡನವ್ವಾ. ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು.