•  
  •  
  •  
  •  
Index   ವಚನ - 639    Search  
 
ದೆಸೆದಿಕ್ಕು ವಲಯದಲಿ ಹೆಸರಿಡಬಾರದುದೊಂದು ಪಸರಿ ಪರ್ಬಿತ್ತು ನೋಡಯ್ಯಾ. ಮೂಲವೊಂದು, ಫಲಮೂರು, ಲೀಲೆಯಿಂದಾರಾಗಿ ತೋರಿದವು; ಬೇರೆ ಬೇರೆ ಅನ್ಯವಾದರು. ತೋರದ ಒಂದರಲ್ಲಿ ಬೇರುಮಾಡಿ ಕಂಡೆಹೆನೆಂದಡೆ, ತೋರಿತ್ತು ಆ ಮೂಲಕ್ಕೆ ಮೂಲ ಕಂಡಯ್ಯಾ. ವಿಚಿತ್ರಮೂಲ ಕಪಿಲಸಿದ್ಧಮಲ್ಲೇಶ್ವರನ ಹತ್ತೆ ಸಾರಿದ ರೂಪು!
Transliteration Desedikku valayadali hesariḍabāradu pasari parbittu nōḍayya. Mūlavondu, phalamūru, līleyinda tōridavu; bēre bēre an'yavādaru. Tōrada ondaralli bērumāḍi kaṇḍ'̔ehenendaḍe, tōrittu ā mūlakke mūla kaṇḍayya. Vicitramūla kapilasid'dhamallēśvarana hatte sārida rūpu!