•  
  •  
  •  
  •  
Index   ವಚನ - 640    Search  
 
ದೆಸೆದಿಕ್ಕುವಳೆಯಕ್ಕೆ ಹೆಸರುಳ್ಳ ಗ್ರಾಮಕ್ಕೆ ವಸುಧೆಯೆಂಟು ದ್ವಾರ ಒಂಬತ್ತು ದ್ವಾರಪಾಲಕರೆಲ್ಲ ಅಯ್ಯ, ನಿಮ್ಮ ಹೋಬಳಿಯ ಹೊರುತ್ತೈದಾರೆ. ಕಾನನ ಕಂಬನಿಯೊಳಗಾಳುತ್ತೇಳುತ್ತೈದಾರೆ ಕಪಿಲಸಿದ್ಧಮಲ್ಲಿನಾಥಯ್ಯ.
Transliteration Desedikkuvaḷeyakke hesaruḷḷa grāmakke vasudheyeṇṭu dvāra ombattu dvārapālakarella ayya, nim'ma hōbaḷiya horuttaidāre. Kānana kambaniyoḷagāḷuttaidāre kapilasid'dhamallināthayya.