•  
  •  
  •  
  •  
Index   ವಚನ - 645    Search  
 
ದೇವರ ದೇವನಾಣೆಯನೂ ರಾಣಿವಾಸದಾಣೆಯನೂ ಇಡದಿರಯ್ಯಾ. ಹೋ! ಹಾ! ಅಯ್ಯಾ ಬೇಡಯ್ಯಾ, ಮೇಲೆ ಕರದಿಮ್ಮಿತ್ತು. ಅವರ ಹಿಂಬಲ್ಲು ಮುಂಬಲ್ಲುಗಳನೆ ಕೂರಹದಲೆ ತರಿತರಿದು ನರಕದಲ್ಲಿಕ್ಕುವರು ಕಪಿಲಸಿದ್ಧಮಲ್ಲಿನಾಥನಾಳುನೇಮಕರು.
Transliteration Dēvara dēvanāṇeyanū rāṇivāsadāṇeyanū iḍadirayyā. Hō! Hā! Ayya bēḍayya, mēle karadim'mittu. Avara himballu mumballugaḷane kūrahadale taritaridu narakadallikkuvaru kapilasid'dhamallināthanāḷunēmakaru.