Index   ವಚನ - 115    Search  
 
ಎಲ್ಲಿ ಹೋದಡೆ ಕಲಿಗೆ ಭಯವಿಲ್ಲ, ಹಂದೆಗೆ ಸುಖವಿಲ್ಲ ಕಾಣಿರಣ್ಣಾ. ಈವಂಗವಗುಣವಿಲ್ಲ, ಕರುಣವುಳ್ಳವಂಗೆ ಪಾಪವಿಲ್ಲ. ನಿಮ್ಮ ಮುಟ್ಟಿ ಪರಧನ ಪರಸತಿ ಪರದೈವವ ತೊರೆದಾತಂಗೆ ಮುಂದೆ ಭವವಿಲ್ಲ ಚೆನ್ನಮಲ್ಲಿಕಾರ್ಜುನಾ.