•  
  •  
  •  
  •  
Index   ವಚನ - 771    Search  
 
ಪ್ರಣವಾಕ್ಷರದಿಂ ಮೇಲೆ ಒಪ್ಪಿಪ್ಪ ಬೀಜಾಕ್ಷರದ ಪರಿಯಿನ್ನೆಂತೊ? ವೈನೈಯೆಂಬ ಶುದ್ಧ ಧವಳತೆಯ ಮೀರಿಪ್ಪ ಅಕ್ಷರವೆರಡು, ಒಂದೆಸಳಿನ ಕಮಳ, ನಿತ್ಯನೆಂಬ ಅಧಿದೇವತೆ ಶುದ್ಧ ಸ್ಫಟಿಕ ಸಂಕಾಶವರ್ಣ ನಿತ್ಯನಿರಂಜನನೈಕ್ಯಪದವು, ಕಪಿಲಸಿದ್ಧಮಲ್ಲಿನಾಥಯ್ಯನ ಕೂಟ ಜಗದಾಟ ಭವದಾಟ ಜನ್ಮನಾಶ.
Transliteration Praṇavākṣaradiṁ mēle oppippa bījākṣarada pariyinnento? Vainaiyemba śud'dha dhavaḷateya mīrippa akṣaraveraḍu, ondesalina kamala, nityanemba adhidēvate śud'dha sphaṭika saṅkāśavarṇa nityaniran̄jananāyakapadavu, kapilasid'dhamallināthayyana kūṭa jagadāṭa bhavadāṭa janmanāśa.