•  
  •  
  •  
  •  
Index   ವಚನ - 772    Search  
 
ಪ್ರಥಮಸ್ಥಾನದಲ್ಲಿ ಒಡಗೂಡಿದಳು, ಪಂಚಬ್ರಹ್ಮನ ಅಪರಸ್ಥಾನದಲ್ಲಿ ಒಡಗೂಡಿದಳು, ಸಹಸ್ರದಳದ ಕಂಜಕನ್ನಿಕೆಯ ಮಧ್ಯಮಸ್ಥಾನದಲ್ಲಿ ಶಕ್ತಿ ಪಂಚಕವನತಿಗಳೆದಳು. ಅವರ ಹಣೆಯಲ್ಲಿ ಲಿ[ಖಿತ]ವ ಬರೆದು, ಅಜಲೋಕದಲ್ಲಿ ಆನಂದ ಪ್ರಕಾಶನವನೊಡಗೂಡಿದ ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಆನಂದಸ್ಥಾನದಾದಿಶಕ್ತಿ.
Transliteration Prathamasthānadalli oḍagūḍidaḷu, pan̄cabrahmana aparasthānadalli oḍagūḍidaḷu, sahasradaḷada kan̄jakannikeya madhyamasthānadalli śakti pan̄cakavanatigaḷedaḷu. Avara haṇeyalli li[khita]va baredu, ajalōkadalli ānanda prakāśanavanoḍagūḍida kapilasid'dhamallikārjunayyana ānandasthānadādiśakti.