•  
  •  
  •  
  •  
Index   ವಚನ - 805    Search  
 
ಬಹುಪರಿಯ ಪುಷ್ಪದಲ್ಲಿ ಹೊಸಪರಿಯ ಜಲದಲ್ಲಿ ಎಸೆದಿಪ್ಪ ಲೋಕ ಬ್ರಹ್ಮಾಂಡಗಳ ಮುಸುಕಿಪ್ಪ ಶಕ್ತಿಯ ಹಸಿಯ ಮಸ್ತಕದಲ್ಲಿ ಒಸೆದು ಅರ್ಚಿಪನಾತ ಪರಮಯೋಗಿ. ಸಾಗರದ ಮೇಲಿಪ್ಪ ಯೋಗಪಂಚಮದಲ್ಲಿ ಭೋಗಿಪನು ನಿತ್ಯತೃಪ್ತನಾಗಿ. ಮೇಲಿಪ್ಪ ಕಳೆಗಳಲ್ಲಿ ತೋರಿಪ್ಪ ಸತ್ವದಲ್ಲಿ ತಾನಿಪ್ಪನೈ ಗುರು ಶ್ರೀ ಕಪಿಲಸಿದ್ಧಮಲ್ಲೇಶ್ವರಾ.
Transliteration Bahupariya puṣpadalli hosapariya jaladalli esedippa lōka brahmāṇḍagaḷa musukippa śaktiya hasiya mastakadalli osedu arcipanātha paramayōgi. Sāgarada mēlippa yōgapan̄camadalli bhōgipanu nityatr̥ptanāgi. Mēlippa kaḷegaḷalli tōrippa satvadalli tānippanai guru śrī kapilasid'dhamallēśvarā.