•  
  •  
  •  
  •  
Index   ವಚನ - 858    Search  
 
ಮಧ್ಯದ ಮಧ್ಯದಲ್ಲಿ ವೇದಾದಿಮೂಲಿನಿ ಆದಿಯ ಸಂತಕ್ಕೆ ಆದಿಯಾಗಿಪ್ಪಳು. ಐದೇಳನಡರಿದಡೆ ಮೈದೋರದಿಪ್ಪಳು. ಪತಿಗೆ ಪತಿಯಾಗಿಪ್ಪಳು ಸತಿಗೆ ಬುದ್ಧಿಯಾಗಿಪ್ಪಳು. ತನ್ನ ನೋಡಲೆಂದು ಹೋದಡೆ ಚಂದ್ರ ಸೂರ್ಯರ ನುಂಗಿ ಕಣ್ಗಾಣದೆ ಹೋಗಿ ಅತ್ತೆಯ ಕೈವಿಡಿಯಲು, ಈ ಮುವ್ವರಿಗೆ ಹುಟ್ಟಿಗೆ ತಾನೆಯಾದಳು. ತಾಯ ಕೈವಿಡಿದನೆಂದು ನಾನಂಜಿ ಸತಿಯಾದೆನೆನಗೆ ಪತಿಯಾದೆ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ನಿನ್ನ ಕೂಡಿದ ಕೂಟ ನೀನರಿದಡರಿವೆ, ಮರದಡೆ ಮರವೆ.
Transliteration Madhyada madhyadalli vēdādimūlini ādiya santakke ādiyāgippaḷu. Aidēḷanaḍaridaḍe maidōradippaḷu. Patige patiyāgippaḷu satige bud'dhiyāgippaḷu. Tanna nōḍalendu hōdaḍe candra sūryara nuṅgi kaṇgāṇade hōgi atteya kaiviḍiyalu, ī muvvarige huṭṭige tāneyādaḷu. Tāya kaiviḍidanendu nānan̄ji satiyādenenage patiyade. Kapilasid'dhamallikārjunayya, ninna kūḍida kūṭa nīnaridaḍarive, maradaḍe marave.