ಮರ್ಮವನರಿತು ಅಯ್ಯಾ ನಿಮ್ಮಕಾಬವರು
ಸುಲಭವೆ ಲೋಕದಲ್ಲಿ?
ಲಿಂಗಭಕ್ತಿ ಜಂಗಮಭಕ್ತಿ, ಗುರುಭಕ್ತಿ ಸುಲಭವೆ?
ಲಿಂಗಭಕ್ತ ಪ್ರಭುದೇವ,
ಜಂಗಮಭಕ್ತ ಬಸವಣ್ಣ
ಗುರು ಮೊದಲಾದ ಪ್ರಸಾದ ಸರ್ವಕ್ಕೂ,
ಅನುಭಾವಿ ಚೆನ್ನಬಸವಣ್ಣ.
ಕಪಿಲಸಿದ್ಧಮಲ್ಲಿಕಾರ್ಜುನಯ್ಯ,
ಇ[0ತಿ]ವರ ಪಾದಕ್ಕೆ ನಮೋ ನಮೋಯೆಂಬೆ
Art
Manuscript
Music
Courtesy:
Transliteration
Marmavanaritu ayyā nim'makābavaru
sulabhave lōkadalli?
Liṅgabhakti jaṅgamabhakti, gurubhakti sulabhave?
Liṅgabhakta prabhudēva,
jaṅgamabhakta basavaṇṇa
guru modalāda prasāda sarvakkū,
anubhāvi cennabasavaṇṇa.
Kapilasid'dhamallikārjunayya,
i[0ti]vara pādakke namō namōyembe