•  
  •  
  •  
  •  
Index   ವಚನ - 882    Search  
 
ಮಾಡಿದ ಕಾರ್ಯದಿಂದ ಜ್ಞಾನ ಸಾಧನೆಯಾಗಬೇಕು. ಮಾಡಿದ ಕಾರ್ಯದಿಂದ ಸತ್ಪುರುಷರ ಹರ್ಷ ನಿರ್ಭರವಾಗಬೇಕು. ಮಾಡಿದ ಕಾರ್ಯದಿಂದ ಪ್ರಮಥರು ಅಹುದಹುದೆನಬೇಕು. ಅದು ಕಾರಣ, ಮಾಡಿಸಿ ಜ್ಞಾನಪ್ರಾಪ್ತಿಯಾಗಲಿಲ್ಲ ; ಮಾಡಿಸಿ ಪ್ರಮಥರ ಮನೋಹ್ಲಾದವಾಗಲಿಲ್ಲ ; ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಸಾಕ್ಷಾತ್ಕಾರವಾಗಲಿಲ್ಲ ; ಕೇಳಾ ಕೇದಾರಯ್ಯಾ.
Transliteration Māḍida kāryadinda sādhaneyāgabēku. Māḍida kāryadinda satpuruṣara harṣa nirbharavāgabēku. Māḍida kāryadinda pramatharu ahudahudenabēku. Adu kāraṇa, māḍisi jñānaprāptiyāgalilla; māḍisi pramathara manōhlādavāgalilla; kapilasid'dhamallikārjunayyana sākṣātkāravāgalilla; kēḷā kēdārayya.