ವಚನ - 949     
 
ರಜತಗಿರಿಯ ಮೇಲೆ ಅಜಪಯೋಗದಲಿ ಭಜಿಸುವೊಡೆ ಅದಕೆ ಹಲವು ಬೆಟ್ಟದಾ ಶೂಲಾಕೃತಿಯ ಮೇಲೆ ಭಾಳಲೋಚನನಿಪ್ಪ ಭಾವದಲಿ ಗಿರಿಗಳಾರೇಳೆಂಟರಾನೀಲ ಕಂಬುವಿನಲ್ಲಿ ಬಾಲಕನು ನಿಂದೀಗ ಬಾಲ್ಯವನು ಕಳೆದು ತನ್ನಯ ರೂಪಿನಾ ಭಾವದಾ ಬೆಳಗಿನಲಿ ಗುರುವಿನಾ ಶುದ್ಧತೆಯ ಸಾಯುಜ್ಯವನು ಮೀರಿ ಸಂಬಂಧವಾತನು ತಾನೊಂದಾಗಿ ತವಕ ತವಕವ ಕೂಡಿ ಕಪಿಲಸಿದ್ಧಮಲ್ಲಿಕಾರ್ಜುನನ ತದ್ರೂಪಾದ.