ವಚನ - 969     
 
ಲೋಕ ಹದಿನಾಲ್ಕರೊಳು ಹೋಗಿ ಅಡಗಿಹೆನೆಂದಡಾ ಪರಿಯ ತಾಮಸರು ತನ್ಮಯವೆ? ಅನೇಕ ಪರಿಯಲ್ಲಿ ಕೊಂದು ಕೂಗಿತ್ತು ಈ ಮಾಯೆ ಕಾಯಯ್ಯ ಕಪಿಲಸಿದ್ಧಮಲ್ಲೇಶ್ವರಯ್ಯಾ.