ವೇದ ಹದಿನಾರುಸಾವಿರಂಗಳು
ನಿನ್ನನರಸಿಯೊದರಿ ಕಾಣದೆ ಹೋದವು.
ನಿನ್ನಾಧಿಕ್ಯವ ಬಲ್ಲವರಾರಯ್ಯ ನಿನ್ನವರಲ್ಲದೆ?
ಉರುತರ ಪರಮಜ್ಞಾನಿ ಘನತರದ ಸಂಯೋಗಿ
ನಿನ್ನ ಪ್ರಮಾಣವನರಿಯಲ್ಕೆ ಆರ ವಶವು ಹೇಳಾ.
ಸೀಮೆಯ ಮೀರಿದ ಸಂಬಂಧಿ,
ಲೆಕ್ಕವ ಮೀರಿದ ಅಪ್ರಮಾಣ,
ಗುರುವಿನ ಕರುಣದಿಂದ ಎನ್ನ
ಕರಸ್ಥಲಕ್ಕೆ ಬಂದು ಚುಳುಕಾದೆ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವೆ.
Art
Manuscript
Music
Courtesy:
Transliteration
Vēda hadinārusāviraṅgaḷu
ninnanarasiyodari kāṇade hōdavu.
Ninnādhikyava ballavarārayya ninnavarallade?
Urutara paramajñāni ghanatarada sanyōgi
ninna pramāṇavanariyalke āra vaśavu hēḷā.
Sīmeya mīrida sambandhi,
lekkava mīrida apramāṇa,
guruvina karuṇadinda enna
karasthalakke bandu cuḷukāde,
kapilasid'dhamallikārjunaliṅgave.