ಸುರುಚಿರ ಸ್ಥಾನದಲ್ಲಿ ಮೂರು ಗುಂಡನಿಟ್ಟು ಸುಡುತೈದಾರೆ
ಕಾಯ ಕರಣೇಂದ್ರಿಯ ಗುಣಂಗಳ ಹುಳ್ಳಿಯ ಮಾಡಿ.
ಕಾಯ ಕರಣೇಂದ್ರಿಯಗಳ ಹುಳ್ಳಿ ಸವೆದು ಅಜಲೋಕವ ತಾಗಿ,
ಅಲ್ಲಿರ್ದ ಶ್ವೇತಜಲ ಪ್ರವಾಹವಾಗೆ, ಅದನುಂಡು,
ನಿತ್ಯಮಹೋತ್ಸಾಹನಾದೆ ಕಾಣಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Surucira sthānadalli mūru guṇḍaniṭṭu suḍutaidāre
kāya karaṇēndriya guṇaṅgaḷa huḷḷiya māḍi.
Kāya karaṇēndriyagaḷa huḷḷi savedu ajalōkava tāgi,
allirda śvētajala pravāhavāge, adanuṇḍu,
nityamahōtsāhanāde kāṇā,
kapilasid'dhamallikārjunā.