•  
  •  
  •  
  •  
Index   ವಚನ - 1169    Search  
 
ಸಮದೃಷ್ಟಿಯಾಗದವನ ಭಕ್ತನೆಂತೆಂಬೆ? ವಿಷಯಂಗಳಳಿಯದವನ ಮಹೇಶನೆಂತೆಂಬೆ? ಶಿವಕರುಣವಿಡಿಯದನ್ನಕ್ಕ ಪ್ರಸಾದಿ ಎಂತೆಂಬೆ? ಅಂಗೇಂದ್ರಿಯಂಗಳಳಿಯದವನ ಪ್ರಾಣಲಿಂಗಿ ಎಂತೆಂಬೆ? ಸಂಕಲ್ಪ ಹರಿಯದನ್ನಕ್ಕ ಶರಣನೆಂತೆಂಬೆ? ನಮ್ಮ ಕಪಿಲಸಿದ್ಧಮಲ್ಲೇಶನ ಕೂಟವನರಿಯದವನ ಐಕ್ಯನೆಂತೆಂಬೆ?
Transliteration Samadr̥ṣṭiyāgadavana bhaktanentembe? Viṣayaṅgaḷaḷiyadavana mahēśanentembe? Śivakaruṇaviḍiyannakka prasādi entembe? Aṅgēndriyaṅgaḷaḷiyadavana prāṇaliṅgi entembe? Saṅkalpa hariyadannakka śaraṇanentembe? Nam'ma kapilasid'dhamallēśana kūṭavanariyadavana aikyanentembe?