•  
  •  
  •  
  •  
Index   ವಚನ - 1170    Search  
 
ಭಕ್ತನಾದ ಬಳಿಕ ಜಂಗಮದ ಗುಣವನರಸಲೇಕೊ? ಮಹೇಶನಾದ ಬಳಿಕ ವಿಷಯಕ್ಕೆಳಸುವುದದೇಕೊ? ಪ್ರಸಾದಿಯಾದ ಬಳಿಕ ಕಂಡುದಕ್ಕೆ ಕೈದುಡುಕುವುದೇಕೊ? ಪ್ರಾಣಲಿಂಗಿಯಾದ ಬಳಿಕ ಪ್ರಪಂಚದ ಹಂಗದೇಕೊ? ಶರಣನಾದ ಬಳಿಕ ಮೋಕ್ಷದ ಹಂಗೇಕೊ? ಐಕ್ಯನಾದ ಬಳಿಕ ಕಪಿಲಸಿದ್ಧಮಲ್ಲಯ್ಯನ ನಾಮಸ್ಮರಣೆಯದೇಕೊ?
Transliteration Bhaktanāda baḷika jaṅgamada guṇavanarasalēko? Mahēśanāda baḷika viṣayakkeḷasuvudadēko? Prasādiyāda baḷika kaṇḍudakke kaiduḍukuvudēko? Prāṇaliṅgiyāda baḷika prapan̄cada haṅgadēko? Śaraṇanāda baḷika mōkṣada haṅgēko? Aikyanāda baḷika kapilasid'dhamallayyana nāmasmaraṇeyadēko?