ವಚನ - 1171     
 
ಭಕ್ತನಾದ ಬಳಿಕ ಜಂಗಮ ಮೆಚ್ಚಬೇಕು; ಜಂಗಮವಾದ ಬಳಿಕ ಭಕ್ತ ಮೆಚ್ಚಬೇಕು. ಭಕ್ತನ ಕಾಯವೆ ಜಂಗಮದ ಕಾಯ; ಜಂಗಮದ ಕಾಯವೆ ಭಕ್ತನ ಕಾಯ. ಕಪಿಲಸಿದ್ಧಮಲ್ಲೇಶಯ್ಯನಲ್ಲಿ ಇದೆ ಉಪಾಯ.