ವಚನ - 1195     
 
ಲಿಂಗಾಂಗಿಗಳಿಗೆ ಪಾದೋದಕವಲ್ಲದೆ, ಅಂಗಭವಿಗೆ ಪಾದೋದಕವೆಲ್ಲಿಹದೊ? ಶರಣರಿಗೆ ಶಿವಾನುಭಾವಗೋಷ್ಠಿಯಲ್ಲದೆ? ಶರ ತಾಗಿದವನಿಗೆ ಶಿವಾನುಭಾವಗೋಷ್ಠಿ ಎಲ್ಲಿಹದೊ? ಲಿಂಗವಿರಹಿತರಿಗೆ ಪಾದೋದಕ ಸಲ್ಲದು, ಸಲ್ಲದು! ಕೊಟ್ಟವಂಗೆ ಮುಕ್ತಿ ಮೊದಲೆ ಇಲ್ಲವು ಇಲ್ಲವು. ಕಪಿಲಸಿದ್ಧಮಲ್ಲಿಕಾರ್ಜುನಾ.