•  
  •  
  •  
  •  
Index   ವಚನ - 1197    Search  
 
ಪ್ರಸಾದ ಕಾಯನಾದ ಬಳಿಕ ರಸರಸಾಯನೌಷಧಿಯ ಹಂಗೇಕೊ? ಮನದಿಚ್ಛೆ ಪೂರ್ಣವಾದ ಬಳಿಕ ಮಂತ್ರದ ಲಕ್ಷ್ಯದ ಹಂಗೇಕೊ? ನೀನಿಲ್ಲಿಗೆ ಬಂದ ಬಳಿಕ ಪರ್ವತದ ಹಂಗೇಕಯ್ಯಾ ಎನಗೆ, ಕಪಿಲಸಿದ್ಧಮಲ್ಲಿನಾಥಾ?
Transliteration Prasāda kāyanāda baḷika rasarasāyanauṣadhiya haṅgēko? Manadicche pūrṇavāda baḷika mantrada lakṣyada haṅgēko? Nīnillige banda baḷika parvatada haṅgēkayyā enage, kapilasid'dhamallināthā?